ಮಂಗಳವಾರ, ಏಪ್ರಿಲ್ 6, 2021

ಗಾಯತ್ರಿ ಮಂತ್ರ

ಗಾಯತ್ರೀ ದೇವಿ

ಗಾಯತ್ರೀ ದೇವಿ (ಸಾವಿತ್ರಿ) ಬ್ರಹ್ಮನ ಪತ್ನಿಯಾದ ಸರಸ್ವತಿಯ ಸ್ವರೂಪ ಎಂಬ ಪ್ರತೀತಿ ಇದೆ. ವೇದ ಮಾತೆ ಎಂದು ಕರೆಯಲ್ಪಡುವ ಗಾಯತ್ರಿ ದೇವಿಯನ್ನು ಐದು ಮುಖ ಮತ್ತು ಹತ್ತು ಬಾಹುಗಳುಳ್ಳವಳು, ಕಮಲಾಸೀನಳು ಮತ್ತು ಹಂಸವಾಹಿನಿಯೆಂದು ವರ್ಣಿಸುತ್ತಾರೆ. ಕೆಲವರು ವೈದಿಕ ಕಾಲದಲ್ಲಿ  ಉಲ್ಲೇಖವಿರಲಿಲ್ಲ ಎಂದು ವಾದಿಸುತ್ತಾ, ಗಾಯತ್ರೀ ದೇವಿಯ ಅರ್ಚನೆ ಅವೈದಿಕ ಎಂದು ಪರಿಗಣಿಸುತ್ತಾರೆ. ಆದರೆ ಸಾಮಾನ್ಯವಾಗಿ ಗಾಯತ್ರೀ ದೇವಿಯಯನ್ನು ಎಲ್ಲರು ಸ್ವೀಕರಿಸಿದ್ದಾರೆ

||  ಓಂ ಭೂರ್ಭುವಃ ಸ್ವ
ತತ್ ಸವಿತುರ್ ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೊ ಯೊ ನಃ ಪ್ರಚೋದಯಾತ್ ||

ಪದಗಳ ಆರ್ಥ

    ಓಂ - ಓಂ
    ಭೂಃ - ಭೂಮಿ
    ಭುವಃ - ಅಂತರಿಕ್ಷ
    ಸ್ವಃ - ಆಕಾಶ
    ತತ್ - ಆ
    ಸವಿತುಃ - ಸವಿತೃವಿನ (ಪರಮಾತ್ಮ, ಪರಬ್ರಹ್ಮ ಮತ್ತು ಸೂರ್ಯ ಎಂದು ಸಹ ಅರ್ಥೈಸಲಾಗುತ್ತದೆ)
    ವರೇಣ್ಯಂ - ಪೂಜಾರ್ಹವಾದ
    ಭರ್ಗೋ - ತೇಜಸ್ಸನ್ನು
    ದೇವಸ್ಯ - ದೇವನ
    ಧೀಮಹಿ - ಧ್ಯಾನಿಸುತ್ತೇವೆ
    ಧಿಯೋ - ಬುದ್ಧಿ, ವಿವೇಕಗಳನ್ನು
    ಯೋ - ಅವನು
    ನಃ - ನಮ್ಮೆಲ್ಲರ
    ಪ್ರಚೋದಯಾತ್ - ಪ್ರಚೋದಿಸಲಿ

ಭಗವದ್ಗೀತೆ ಭಗವಂತನ ವಚನ.

ಗಾಯತ್ರಿಯ ಮೊದಲ ಅಕ್ಷರ 'ಓಂ' ಅದು ಬ್ರಹ್ಮ ದೇವರಿಗೆ ಭಗವಂತ ಕೊಟ್ಟ ಮೊದಲ ಉಪದೇಶ. ಹಾಗಾಗಿ ಇದರಲ್ಲಿ ಸಮನ್ವಯ ಮಾಡಬಹುದಾಗಿದೆ.

ತತ್ - ವ್ಯಾಪ್ತಿತ್ವ - ಎಲ್ಲ ಕಡೆ ವ್ಯಾಪಿಸಿದ್ದಾನೆ.

ಗೀತೆಯ ಹನ್ನೊಂದನೇ ಅಧ್ಯಾಯದಲ್ಲಿ ಪರಮಾತ್ಮ ತನ್ನ ವಿಶ್ವರೂಪ ತೋರಿಸುವ ಮೂಲಕ ತನ್ನ ಗುಣಗಳ, ಕ್ರಿಯಗಳ ಹಾಗು ರೂಪಗಳ ವ್ಯಾಪ್ತಿಯನ್ನು ಅರ್ಜುನನಿಗೆ ತೋರಿಸಿದ್ದಾನೆ.

ಸವಿತು : ಅವನು ಸೃಷ್ಟಿ ಕರ್ತಾ

ಭಗವಂತ ತಾನು ಪ್ರಕೃತಿಯ ಮೂಲಕ ಸೃಷ್ಟಿಯನ್ನು ಮಾಡುತ್ತಾನೆ ಎನ್ನುವುದಾಗಿ 'ಮಯಾಧ್ಯಕ್ಷೆಣ ಪ್ರಕೃತಿ:' ಎನ್ನುವ ಕಡೆ ಹೇಳುತ್ತಾನೆ.

ವರೇಣ್ಯಂ - ಅವನು ಶ್ರೆಷ್ಟನು

ಗೀತೆಯಲ್ಲಿ 'ಮತ್ತ: ಪರತರಂ ನಾಸ್ತಿ' ಎಂದು ನನಗಿಂತ ಉತ್ತಮನು ಯಾರು ಇಲ್ಲ ಎಂದು ಸ್ವಯಂ ಭಗವಂತ ಹೇಳುತ್ತಾನೆ. ಹದನೈದನೇ ಅಧ್ಯಾಯದಲ್ಲಿ ತಾನು ಕ್ಷರ ಮತ್ತು ಅಕ್ಷರವನ್ನು ಮೀರಿದವನು ಮತ್ತು ತನ್ನನ್ನು ವೇದಗಳು ಪುರುಷೋತ್ತಮ ಎಂದು ಕರೆಯುತ್ತವೆ . ಹೀಗೆ ತಿಳಿಸಿಲಾಗಿದೆ.

ಭರ್ಗ: ಪ್ರಕಾಶಮಾನನಾಗಿದ್ದಾನೆ

ಸಾವಿರ ಸೂರ್ಯಗಳು ಒಮ್ಮೆಲೇ ಉದಯಿಸಿದಾಗ ಆಗುವ ಬೆಳಕು ವಿಶ್ವರೂಪ ಕಾಲದಲ್ಲಿ ಆಯಿತು. ಅರ್ಜುನನಿಗೆ ದಿವ್ಯ ಚಕ್ಷಸ್ಸು ಕೊಟ್ಟು ವಿಶ್ವರೂಪ ತೋರಿಸಿದ. ಮತ್ತೆ ವಿಶ್ವರೂಪದಲ್ಲಿ ಸಂಹಾರ ಚಿತ್ರಣೆ ಅಂದರೆ ಎಲ್ಲ ಭಾಂದವರು ಪರಮಾತ್ಮನ ಬಾಯಿಯಲ್ಲಿ ಹೋಗಿ ಸಾಯುವಂತದ್ದು ಅರ್ಜುನನಿಗೆ ತೋರಿಸಿದ.

ದೇವಸ್ಯ :  ಅವನು ಎಲ್ಲರಿಂದ ಸ್ತುತಿಸಲ್ಪಟ್ಟವನು, ಪ್ರೇರಣೆ ಮಾಡುವವನು

ಅರ್ಜುನನಿಗೆ ತನ್ನ ಕರ್ತವ್ಯದಲ್ಲಿ ಪ್ರೇರಣೆ ಮಾಡಿ ಕೌರವಸೇನೆಯನ್ನು ಗೆಲ್ಲುವಂತೆ ಮಾಡಿದನು. ವಿಶ್ವರೂಪದಲ್ಲಿ ಮಹರ್ಷಿಗಳೇ ಮೊದಲಾದವರು ಪರಮಾತ್ಮನನ್ನು ಸ್ತುತಿಸಿದರು.

ಧೀಮಹಿ : ಅವನು ಧ್ಯಾನಿಸಲ್ಪಡಬೇಕಾದವನು

ಗೀತೆಯ ಎಂಟನೆ ಅಧ್ಯಾಯದಲ್ಲಿ ತಾನು ಎಲ್ಲರಿಂದ ಅಂತ್ಯಕಾಲದಲ್ಲಿ ಧ್ಯಾನಿಸಲ್ಪಡಬೇಕಾದವನು ಎಂದು ತಿಳಿಸುತ್ತಾನೆ.

ಧಿಯೋ ಯೋ ನ: ಪ್ರಚೋದಯಾತ್  : ಅವನು ನಮ್ಮನ್ನು ಸತ್ಕರ್ಮಗಳಲ್ಲಿ ಪ್ರಚೋದನೆ ಮಾಡಲಿ

ಗೊತ್ತಿದ್ದವರು ಮತ್ತಷ್ಟು ಮಾಹಿತಿ ಜೊತೆಗೆ ತಿಳಿಸಿಕೊಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ