ಮಂಗಳವಾರ, ಮೇ 29, 2018

ದೇವಜಿಜ್ಞಾಸಾ

ಸಂಖ್ಯಾನಂ ಪರಮಾಣೂನಾಂ ಕಾಲೇನ ಕ್ರಿಯತೇ ಮಯಾ |
ನ ತಥಾ ಮೇ ವಿಭೂತೀನಾಂ ಸೃಜತೋsಂಡಾನಿ ಕೋಟಿಶಃ || (ಭಾಗವತ ಪುರಾಣ ೧೧.೧೬.೩೯)
''ಒಂದೊಮ್ಮೆ ಎಣಿಸತೊಡಗಿದರೆ ಪರಮಾಣುಗಳ ಎಣಿಕೆಯಾದರೂ ಕದಾಚಿತ್ ಆಗಬಹುದೇನೋ.!!, ಆದರೆ ನನ್ನ  ವಿಭೂತಿ(ಮಹಿಮೆ)ಗಳ ಎಣಿಕೆ ಸಾಧ್ಯವಾಗದು. ಏಕೆಂದರೆ  ನಾನು ರಚಿಸಿದ ಕೋಟಿ ಕೋಟಿ ಬ್ರಹ್ಮಾಂಡಗಳ ಎಣಿಕೆಯೇ ಆಗದಿದ್ದಾಗ ನನ್ನ ವಿಭೂತಿಗಳ ಗಣನೆಯಾದರೂ ಹೇಗಾಗಬಲ್ಲದು?''
ಈ ಮಾತು ಭಕ್ತ ಉದ್ಧವನಿಗೆ ಭಗವಂತ ಹೇಳಿದ ಮಾತು.
ಇದಕ್ಕೆ ಪೂರಕವಾಗಿ ಕುರುಕ್ಷೇತ್ರದ ಯುದ್ಧದ ಸಮಯದಲ್ಲಿ ಅರ್ಜುನನಿಗೆ ಭಗವಂತ ಹೇಳಿದ್ದು
ವಿಷ್ಟಭ್ಯಾಹಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ್ || (ಭ.ಗೀ ೧೦.೪೨)
''ನಾನು ಈ ಸಂಪೂರ್ಣ ಜಗತ್ತನ್ನು ನನ್ನ
ಒಂದಂಶದಿಂದ ಧರಿಸಿಕೊಂಡಿದ್ದೇನೆ.'' 
(ಆವರಿಸಿಕೊಂಡಿದ್ದೇನೆ)
ಈ ಎರಡು ಮಾತುಗಳನ್ನು ಕೇಳಿದಾಗ ನಾವು ಆಸ್ತಿಕರು ಶ್ರದ್ಧೆಯಿಂದ ಮತ್ತು ಇಂದ್ರಿಯಗಳಿಗೆ ಗೋಚರವಾಗದ ವಿಷಯದಲ್ಲಿ ವೇದ, ಶಾಸ್ತ್ರ, ಪುರಾಣಗಳೇ ಆಧಾರ ಎಂಬ ವಿವೇಕದಿಂದ ಹಾಗೂ ಮನಸ್ಸಿನಿಂದ ಊಹಿಸಲೂ ಅಸಾಧ್ಯವಾದಂತಹ ಈ ವಿಚಿತ್ರ ಪ್ರಪಂಚದ ವ್ಯವಸ್ಥಿತ ಕಾರ್ಯ ಚಟುವಟಿಕೆಗಳನ್ನು ಗಮನಿಸಿ ಆ ಭಗವಂತನ ಆ ಮಾತುಗಳನ್ನು ಒಪ್ಪುತ್ತೇವೆ. 
ಆದರೆ ಅನೇಕರು ಇದೆಲ್ಲ ಬರೀ ಸುಳ್ಳು!! ಎನ್ನಬಹುದೇನೋ ಆದರೆ ನಾವು ಅದನ್ನು ಒಪ್ಪುವುದಿಲ್ಲ. ಯಾಕೆಂದರೆ ಉದ್ಧವನಿಗೆ ಭಗವಂತ ಹೇಳಿದ ಮಾತನ್ನು ವಿಮರ್ಶಿಸಿ ನೋಡುವಾಗ ಅನೇಕ ವೈಜ್ಞಾನಿಕ ಅಂಶಗಳನ್ನು ಕಾಣಬಹುದು. "ಸಂಖ್ಯಾನಂ ಪರಮಾಣೂನಾಂ "ಎಂಬಲ್ಲಿ ಜಗತ್ತಿನಲ್ಲಿ ಅತ್ಯಂತ ಸೂಕ್ಷ್ಮವಾದದ್ದು ಪರಮಾಣುಗಳು ಎನ್ನುವುದನ್ನು ತಿಳಿಸುತ್ತವೆ.(ಶ್ರುತಿ, ಸ್ಮೃತಿ ,ಪುರಾಣಗಳಲ್ಲಿ  ಅನೇಕ ಕಡೆಗಳಲ್ಲಿ ಪರಮಾಣುಗಳ ಉಲ್ಲೇಖ ಬಂದಿದೆ.) ಇದೊಂದೇ ಅಲ್ಲ. "ಸೃಜತೋsಂಡಾನಿ ಕೋಟಿಶಃ "ಎಂಬಲ್ಲಿ ಕೋಟ್ಯಾನುಕೋಟಿ ಬ್ರಹ್ಮಾಂಡಗಳಿವೆ (ನಕ್ಷತ್ರಗಳ ಪುಂಜಗಳಿವೆ )ಎಂಬುದು ಕೂಡ ವಿಜ್ಞಾನಿಗಳು ಇತ್ತೀಚಿಗೆ ಕಂಡುಕೊಂಡಿದ್ದಾರೆ.
ಅತಿ ಸೂಕ್ಷ್ಮಪರಮಾಣುಗಳಿಂದ ಹಿಡಿದು ಬೃಹದ್ ಬ್ರಹ್ಮಾಂಡಗಳವರೆಗಿನ ಜ್ಞಾನವು  ಯಾವುದೇ ಮೈಕ್ರೋಸ್ಕೋಪ್, ಟೆಲಿಸ್ಕೋಪ್ಗಳಿಲ್ಲದ ಆ ಕಾಲದಲ್ಲಿ ಹೇಗೆ ಬಂತು ?
ವೈದಿಕಧರ್ಮದ ಅನುಯಾಯಿಗಳಿಗೆ ಮೊದಲೇ ಇವೆಲ್ಲದರ ಜ್ಞಾನವಿತ್ತೆಂದರೆ ಬರಿ ಸುಳ್ಳು.ವೇದಗಳು ಅಪ್ರಾಮಾಣಿಕವಾದವುಗಳು, ಪುರಾಣಗಳಂತೂ ಕೇವಲ ಸುಳ್ಳುಗಳ ಕಂತೆ ಎಂದೆಲ್ಲಾ ಭಾಷಣ ಬಿಗಿಯುವ ಬುದ್ಧಿವಂತರಿದ್ದಾರೆ.ಅವರಿಗೆ ಇದರ ಉತ್ತರ ಗೊತ್ತಿರಬಹುದೇನೋ....ಗೊತ್ತಿದ್ದವರು  ತಿಳಿಸಬಹುದು....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ